+91 9606283332, +91 9739412555 info@bgsirs.edu.in

ಬೆಂಗಳೂರು , ನಿತ್ಯಾನಂದ ನಗರ : ದಿನಾಂಕ :15 /11/ 2025 ರಂದು ಬಿ ಜಿ ಎಸ್  ಅಂತರ ರಾಷ್ಟ್ರೀಯ ವಸತಿ ಶಾಲೆಯಲ್ಲಿ ಈ ವರ್ಷ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಮತ್ತು ಸಂಭ್ರಮದಿಂದ ಆಚರಿಸಲಾಯಿತು . ಶಾಲೆಯ ಆವರಣ ಸಂಪೂರ್ಣವಾಗಿ ಕೆಂಪು–ಹಳದಿ ಬಾವುಟಗಳಿಂದ ಸಿಂಗರಿಸಿಕೊಂಡು ಹಬ್ಬದ ವಾತಾವರಣವನ್ನು ನಿರ್ಮಿಸಿತು.

ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಪ್ರಕಾಶನಾಥ ಸ್ವಾಮೀಜಿ ಆಗಮಿಸಿದರು. ಸ್ವಾಮೀಜಿಯವರ ಆಗಮನವನ್ನು ವಿದ್ಯಾರ್ಥಿಗಳು ಪರಂಪರಾತ್ಮಕ ಡೊಳ್ಳು ಕುಣಿತ ಮತ್ತು ವೀರಗಾಸೆ ಪ್ರದರ್ಶನದ ಮೂಲಕ ಭವ್ಯವಾಗಿ ಸ್ವಾಗತಿಸಿದರು. ಈ ಸಂಪ್ರದಾಯಿಕ ಸ್ವಾಗತವು ರಾಜ್ಯೋತ್ಸವದ ಸೊಬಗನ್ನು ಇನ್ನಷ್ಟು ಹೆಚ್ಚಿಸಿತು. ಬೆಳಗ್ಗೆ 10 ಗಂಟೆಗೆ ಶಾಲಾ ಆವರಣದಲ್ಲಿ ಪ್ರಕಾಶನಾಥ ಸ್ವಾಮೀಜಿ ಧ್ವಜಾರೋಹಣ ಮಾಡಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹಸಿರು ನಿಶಾನೆ ನೀಡಿದರು.

ಮುಂದೆ ವಿದ್ಯಾರ್ಥಿಗಳಿಂದ ಜಾನಪದ ನೃತ್ಯ, ರಾಜ್ಯೋತ್ಸವ ಗೀತೆ, ನಾಟಕ ಮತ್ತು ಕವಿತೆಗಳ ಪ್ರದರ್ಶನ ಜರುಗಿತು. ಕನ್ನಡದ ಸಂಸ್ಕೃತಿ, ಪರಂಪರೆ ಮತ್ತು ನಾಡಿನ ಚೈತನ್ಯವನ್ನು ವಿದ್ಯಾರ್ಥಿಗಳು ಸುಂದರವಾಗಿ ಅಭಿವ್ಯಕ್ತಿಸಿದರು.

ಈ ಸಂದರ್ಭದಲ್ಲಿ ಪ್ರಕಾಶನಾಥ ಸ್ವಾಮೀಜಿ ಮಾತನಾಡಿ “ಕನ್ನಡ ನಮ್ಮ ಹೆಮ್ಮೆ ಮಕ್ಕಳಲ್ಲಿ ಭಾಷಾ ಪ್ರೀತಿಯನ್ನು ಬೆಳೆಸುವುದು ನಮ್ಮೆಲರ ಜವಾಬ್ದಾರಿ ಜೊತೆಗೆ ನಮ್ಮ ಮಕ್ಕಳಿಗೆ ನಮ್ಮ ನಾಡು ನುಡಿ, ಸಂಸ್ಕೃತಿ, ಕಲೆ ಕಲಿಸುವುದರಲ್ಲಿ ನಮ್ಮ ಸಂಸ್ಥೆ ಮುಂಚೂಣಿಯಲ್ಲಿರುತ್ತದೆ” ಎಂದು ಹೇಳಿದರು.

ಶಾಲೆಯ ಪ್ರಾಂಶುಪಾಲರು ಶ್ಯಾಮ ಶ್ರೀ ಚಾಟರ್ಜಿ ಕನ್ನಡದಲ್ಲಿ ಪ್ರೇರಣಾದಾಯಕ ಭಾಷಣ ಮಾಡಿ, ಕನ್ನಡದ ಮೌಲ್ಯ, ಪರಂಪರೆ ಮತ್ತು ಭಾಷಾ ಸಂರಕ್ಷಣೆಯ ಅಗತ್ಯವನ್ನು ಮಕ್ಕಳಿಗೆ ತಿಳಿಸಿದರು. ಅವರು ವಿದ್ಯಾರ್ಥಿಗಳ ಕಲಾತ್ಮಕ ಪ್ರದರ್ಶನವನ್ನು ಮೆಚ್ಚಿದರು.

ಕಾರ್ಯಕ್ರಮವು ಕೊನೆಯಲ್ಲಿ ಎಲ್ಲರೂ ಗೌರವದಿಂದ ನಾಡಗೀತೆ ಹಾಡುವುದರ ಮೂಲಕ ಕಾರ್ಯಕ್ರಮವು  ಸಾರ್ಥಕವಾಗಿ ನೆರವೇರಿತು.